ಗ್ಲಿಮ್, ಜೊಹಾನ್ ವಿಲ್‍ಹೆಲ್ಮ್ ಲೂಡ್‍ವಿಗ್ -
 	1719 - 1803. ಜರ್ಮನ್ ಕವಿ. ಕಿರಿಯ ಕವಿಗಳಿಗೆ ಈತನು ನೀಡುತ್ತಿದ್ದ ಪ್ರೋತ್ಸಾಹ ಮತ್ತು ಸಹಾಯಗಳಿಂದಾಗಿ ಈತನನ್ನು ಫಾದರ್ ಗ್ಲಿಮ್ ಎಂದು ಕರೆಯಲಾಗುತ್ತಿತ್ತು. ಉಜ್ವಲವಾದ ದೇಶಾಭಿಮಾನದಿಂದ ಪ್ರೇರಿತವಾದ ಈತನು ಕವಿತೆಗಳು, ಫ್ರೆಡರಿಕ್ ಮಹಾಶಯನ ಕಾಲದ ವೀರರಸ ಪ್ರಧಾನವಾದ ಕವಿತೆಗಳ ಸಾಲಿನಲ್ಲಿ ಬಹಳ ಮೆಚ್ಚುಗೆಯನ್ನು ಪಡೆದವು. ಭಾವನೆಗಳ ಸಹಜತೆಯಿಂದ ಮತ್ತು ಪರಿಣಾಮಕಾರಿಯಾದ ಶೈಲಿಯಿಂದ ಇವುಗಳಲ್ಲಿ ಅನೇಕವು ಶ್ರೇಷ್ಠ ಕವಿತೆಗಳೆನ್ನಿಸಿವೆ ಈತನ ಎಲ್ಲ ಕೃತಿಗಳನ್ನು ಎಂಟು ಸಂಪುಟಗಳಲ್ಲಿ ಸಂಪಾದಿಸಿ ಪ್ರಕಟಿಸಲಾಗಿದೆ. (1811 -14). ಈತನ ಪ್ರೂಸಿಷೆ ಕ್ರೀಗ್‍ಸ್ಟೀಡರ್ ಘಾನ್ ಈನೆಮ್ ಗ್ರೆನಾಡಿಯರ್ - ಎಂಬುದು ಬಹು ಉತ್ತಮವಾದ ಕೃತಿಯೆಂದು ಖ್ಯಾತವಾಗಿದೆ.			 (ಪಿ.ಎನ್.ಆರ್.)
(ಪಿ.ಆರ್.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ